Twitxy Saved

DK Shivakumar

Verified account This account is verified. Learn more

@DKShivakumar

ಕನ್ನಡಿಗ | Chief Minister, Karnataka | Congressman
ಕರ್ನಾಟಕ Joined November 2015
169 Following 703K Followers 16K Posts

Latest posts 5

DK Shivakumar Verified account @DKShivakumar
ಹಾಸನ ಜಿಲ್ಲೆಯ ಬೀಕನಹಳ್ಳಿ ಗ್ರಾಮದ ಐತಿಹಾಸಿಕ ಶ್ರೀ ಚೌಡೇಶ್ವರಿ ಪುರದಮ್ಮ ದೇವಸ್ಥಾನಕ್ಕೆ ಇಂದು ಕುಟುಂಬ ಸಮೇತ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆ. ಈ ಪವಿತ್ರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷೆ, ಸಮೃದ್ಧಿ ಹಾಗೂ ಸಮಸ್ತ ಜನರ ಒಳಿತಿಗಾಗಿ ಪ್ರಾರ್ಥಿಸಿದೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
15 replies 39 reposts 458 likes 12K views View on X
DK Shivakumar Verified account @DKShivakumar
ಇಂದು ಶ್ರೀ ಹಾಸನಾಂಬೆ ಜಾತ್ರಾ ಮಹೋತ್ಸವ–2026ರ ಅಂಗವಾಗಿ ಹಾಸನದ ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನ ಹಾಗೂ ಹಾಸನಾಂಬ ಕ್ರೀಡೋತ್ಸವದಲ್ಲಿ ಪಾಲ್ಗೊಂಡೆನು. ಇದೇ ವೇಳೆ ವಾಲಿಬಾಲ್ ಆಡುವ ಮೂಲಕ ಕ್ರೀಡಾಪಟುಗಳನ್ನು ಹುರಿದುಂಬಿಸಿ, ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್, ಜಿಲ್ಲಾಧಿಕಾರಿ ಶ್ರೀಮತಿ ಕೆ.ಎಸ್. ಲತಾ ಕುಮಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
6 replies 24 reposts 202 likes 5.6K views View on X
DK Shivakumar Verified account @DKShivakumar
ಹಾಸನಾಪುರ ಮಧ್ಯಸ್ಥೇ ಹಾಸ್ಯರೂಪೇ ಮಹೇಶ್ವರಿ |
ಭಕ್ತಾಭೀಷ್ಟಪ್ರದೇ ದೇವಿ ಹಾಸನಾಂಬೇ ನಮೋಸ್ತುತೇ ||

ಹಾಸನದ ಅಧಿದೇವತೆ, ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶಕ್ತಿ ಸ್ವರೂಪಿಣಿ ಶ್ರೀ ಹಾಸನಾಂಬೆಯ ಸನ್ನಿಧಿಗೆ ಇಂದು ಕುಟುಂಬ ಸಮೇತ ಭೇಟಿ ನೀಡಿ, ತಾಯಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದೆ. ಇದೇ ವೇಳೆ ಜಗನ್ಮಾತೆಯ ಕೃಪಾಶೀರ್ವಾದದಿಂದ ನಾಡಿನ ಪ್ರತಿಯೊಂದು ಮನೆಯಲ್ಲೂ ಸುಖ, ಶಾಂತಿ, ನೆಮ್ಮದಿ ನೆಲೆಸಲಿ, ಎಲ್ಲರ ಬದುಕಿನಲ್ಲಿ ಒಳಿತು ಮತ್ತು ಸಮೃದ್ಧಿ ತುಂಬಿರಲಿ ಎಂದು ಪ್ರಾರ್ಥಿಸಿದೆ.

ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಎಂ. ಶಿವಲಿಂಗೇಗೌಡ, ಸಂಸದರಾದ ಶ್ರೀ ಶ್ರೇಯಸ್ ಎಂ. ಪಟೇಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
12 replies 29 reposts 438 likes 12K views View on X