Twitxy Saved

M B Patil

Verified account This account is verified. Learn more

@MBPatil

Minister for Commerce & Industries, Infrastructure GoK |
Educationist-Engineer-Basava Literature Enthusiast
ವಿಜಯಪುರ - Vijayapura, India mbpatil.com Joined October 2014
1.4K Following 118K Followers 21K Posts

Latest posts 5

Pinned post

M B Patil Verified account @MBPatil
Happy to share that our Koti Vruksha Abhiyana-a model initiative ideated and executed in Vijayapura-has its inspiring story featured in #TheNewYorkTimes!

An incredible story of a people’s movement: 1.5 crore trees planted, raising forest cover from just 0.17% to 2%.

A true testament to political will, systemic action & the power of collective participation.

Proud that Vijayapura’s green success is inspiring the world!

My heartfelt thanks to all the stakeholders and the people of Vijayapura.

nytimes.com/card/2025/09/0…
141 replies 340 reposts 1.8K likes 235K views View on X
M B Patil Verified account @MBPatil
ವಿಜಯಪುರದ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ₹1,622 ಕೋಟಿ ಬೃಹತ್ ಹೂಡಿಕೆಯೊಂದಿಗೆ 'ಕ್ಯಾಂಪಾ ಕೋಲಾ' ಘಟಕಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.

100 ಎಕರೆ ವಿಸ್ತೀರ್ಣದ ಈ ಅತ್ಯಾಧುನಿಕ ಘಟಕದಿಂದ ಸುಮಾರು 1,200 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಸ್ಥಳೀಯರಿಗೆ ಮತ್ತು ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುವುದು.

ಇದು ಬಸವನಾಡಿನಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗಕ್ಕೆ ನಾಂದಿಯಾಗಿದೆ!
#CampaCola
1 replies 8 reposts 60 likes 1.8K views View on X
M B Patil Verified account @MBPatil
ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ

₹1,600+ ಕೋಟಿ ಹೂಡಿಕೆಯ ರಿಲಯನ್ಸ್ ಘಟಕ ಸ್ಥಾಪನೆಗೆ ಭೂಮಿಪೂಜೆ

ಜಿಲ್ಲೆಯಲ್ಲಿ 10ರಿಂದ 12 ಸಾವಿರ ಉದ್ಯೋಗ ಸೃಷ್ಟಿಸುವ ಗುರಿ
#CampaCola @iShivanandpatil
0:33
2 replies 15 reposts 93 likes 2.4K views View on X
M B Patil Verified account @MBPatil
A New Era of Industrial Growth Begins in Basava Nadu!

Today, I performed the groundbreaking ceremony for a ₹1,600+ crore Campa Cola facility at Mulwad Industrial Area, Vijayapura, spread across approximately 100 acres.

The project will create over 1,200 direct jobs initially, with the potential for 5,000 jobs in subsequent phases. I have directed the company to prioritise land-losing farmer families and local residents in employment.

With several major companies exploring investments and some already signing agreements, Vijayapura is emerging as a promising industrial destination.

Inspired by Shri Sharad Pawar’s Baramati model, my vision is to transform Vijayapura through integrated growth in agriculture, horticulture, dairy and industry, creating opportunities for our youth closer to home.
@iShivanandpatil #campacola
1 replies 11 reposts 69 likes 2K views View on X
M B Patil Verified account @MBPatil
ಬಸವನಾಡಿನಲ್ಲಿ ಕೈಗಾರಿಕಾ ಕ್ರಾಂತಿಯ ನವಯುಗದ ಆರಂಭ!
ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಕ್ಯಾಂಪಾಕೋಲಾ ಘಟಕ ನಿರ್ಮಾಣ ಘಟಕ್ಕೆ ಭೂಮಿ ಪೂಜೆ
₹1,600+ ಕೋಟಿ ಹೂಡಿಕೆ | 1,200+ನೇರ ಉದ್ಯೋಗ ಸೃಷ್ಟಿ | ಭೂಮಿ ನೀಡಿದ ರೈತ ಕುಟುಂಬಗಳಿಗೆ ಉದ್ಯೋಗದಲ್ಲಿ ಆದ್ಯತೆ

ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಸುಮಾರು 100 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ಬೃಹತ್ ಕ್ಯಾಂಪಾ ಕೋಲಾ ಘಟಕಕ್ಕೆ ಇಂದು ಭೂಮಿಪೂಜೆ ನೆರವೇರಿಸಿ, ಕಂಪನಿಯ ಮುಖ್ಯಸ್ಥರಿಗೆ ಶುಭ ಹಾರೈಸಿದೆ.

ಈ ಘಟಕದ ಸ್ಥಾಪನೆಯಿಂದ ಆರಂಭಿಕ ಹಂತದಲ್ಲಿ ಸುಮಾರು 1,200ಕ್ಕೂ ಹೆಚ್ಚು ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮುಂದಿನ ಹಂತಗಳಲ್ಲಿ ಒಟ್ಟು 5,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಈ ಯೋಜನೆಗೆ ಭೂಮಿ ನೀಡಿದ ರೈತ ಕುಟುಂಬಗಳು ಹಾಗೂ ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಮೊದಲ ಆದ್ಯತೆ ನೀಡುವಂತೆ ಕಂಪನಿಯ ಮುಖ್ಯಸ್ಥರಿಗೆ ಸೂಚಿಸಿದ್ದೇನೆ.

ಕ್ಯಾಂಪಾ ಕೋಲಾ ಘಟಕದ ಸ್ಥಾಪನೆಯೊಂದಿಗೆ ವಿಜಯಪುರ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಗೆ ಹೊಸ ವೇಗ ದೊರೆಯಲಿದೆ. ಮುಂದಿನ ದಿನಗಳಲ್ಲಿ ವಿಂಗ್ಸ್ ವಿಟೇರಾ, ಹಿಂದೂಸ್ಥಾನ್ ಕೋಕಾ-ಕೋಲಾ, ಹೈಟೆಕ್ ಫೈಬ್ಸ್, ಬ್ಯಾಟರಿ ಉತ್ಪಾದನಾ ಕ್ಷೇತ್ರದ ಸರ್ವರ್ ಟೆಕ್ ಪವರ್ ಸಿಸ್ಟಂ, ಮೆಟಾಗ್ರೂಪ್ ಹಾಗೂ ಏರೋಸ್ಪೇಸ್ ಮತ್ತು ರಕ್ಷಣಾ ವಲಯದಲ್ಲಿ ಹೆಸರು ಮಾಡಿರುವ ಟೋನ್ಬೋ ಇಮೇಜಿಂಗ್ ಸೇರಿದಂತೆ ಹಲವು ಕಂಪನಿಗಳೊಂದಿಗೆ ಹೂಡಿಕೆ ಸಂಬಂಧ ಮಾತುಕತೆ ನಡೆಸಲಾಗಿದೆ. ಹಲವು ಕಂಪನಿಗಳು ಈಗಾಗಲೇ ಹೂಡಿಕೆ ಒಪ್ಪಂದಗಳಿಗೂ ಸಹಿ ಹಾಕಿವೆ.

ಈ ಎಲ್ಲ ಬೆಳವಣಿಗೆಗಳು ವಿಜಯಪುರ ಜಿಲ್ಲೆಯನ್ನು ಪ್ರಮುಖ ಕೈಗಾರಿಕಾ ತಾಣವನ್ನಾಗಿ ರೂಪಿಸುವುದರ ಜೊತೆಗೆ, ಸ್ಥಳೀಯ ಯುವಜನರಿಗೆ ನಮ್ಮ ನೆಲದಲ್ಲಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸಲಿವೆ. ಕೃಷಿಯ ಜೊತೆಗೆ ಕೈಗಾರಿಕೆಗಳೂ ಜಿಲ್ಲೆಯ ಆರ್ಥಿಕ ಪ್ರಗತಿಯ ಪ್ರಮುಖ ಶಕ್ತಿಯಾಗಲಿವೆ. ಬಸವನಾಡಿನಲ್ಲಿ ಕೈಗಾರಿಕಾ ಹಾಗೂ ಉದ್ಯೋಗ ಕ್ರಾಂತಿಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ವಿಶ್ವಾಸ ನನ್ನದು.

ಬಾರಾಮತಿ ಮಾದರಿ ಅಭಿವೃದ್ಧಿ: ಕೃಷಿ, ತೋಟಗಾರಿಕೆ, ಹೈನುಗಾರಿಕೆ ಹಾಗೂ ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಸಮಗ್ರ ಅಭಿವೃದ್ಧಿ ಸಾಧಿಸುವ ಮೂಲಕ, ಹಿರಿಯ ನಾಯಕರಾದ ಶ್ರೀ ಶರದ್ ಪವಾರ್ ಅವರು ಬಾರಾಮತಿಯನ್ನು ಅಭಿವೃದ್ಧಿಪಡಿಸಿದ ಮಾದರಿಯಲ್ಲಿ ವಿಜಯಪುರ ಜಿಲ್ಲೆಯನ್ನು ರೂಪಿಸಬೇಕೆಂಬ ನನ್ನ ಕನಸನ್ನು ನನಸು ಮಾಡುವತ್ತ ದೃಢ ವಿಶ್ವಾಸದಿಂದ ಮುನ್ನಡೆಯುತ್ತಿದ್ದೇನೆ.

ಇಂದಿನ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಶಿವಾನಂದ ಪಾಟೀಲ, ಶ್ರೀ ವಿಠ್ಠಲ ಕಟಕದೊಂಡ, ಮಾಜಿ ಶಾಸಕರಾದ ಶ್ರೀ ರಾಜು ಆಲಗೂರ, ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ (RCPL) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಕೇತನ್ ಮೋದಿ, ಉಪಾಧ್ಯಕ್ಷರಾದ ಶ್ರೀ ಅರ್ಪಣ್ ಬಸು, KIADB-CEO ಶ್ರೀ ಗೋವಿಂದರೆಡ್ಡಿ, KUM-MD ಶ್ರೀ ದೊಡ್ಡ ಬಸವರಾಜು, VDA ಅಧ್ಯಕ್ಷರಾದ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಶ್ರೀ ಅಬ್ದುಲ್ ಹಮೀದ್ ಮುಶ್ರೀಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಲಕ್ಷ್ಮಣ ನಿಂಬರಗಿ, ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ರೈತರು ಹಾಗೂ ಸ್ಥಳೀಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.
@iShivanandpatil #CampaCola