Twitxy Saved

Ramalinga Reddy

Verified account This account is verified. Learn more

@RLR_BTM

Minister for Forest, Ecology & Environment - Karnataka | MLA - BTM Layout |
Karnataka Joined September 2016
26 Following 80K Followers 6.7K Posts

Latest posts 5

Ramalinga Reddy Verified account @RLR_BTM
ಗರ್ಭಿಣಿ ಹಿಪ್ಪೊಗೆ ಚಿಕಿತ್ಸೆ ನೀಡುವ ವೇಳೆ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಧೈರ್ಯಶಾಲಿ ವನ್ಯಜೀವಿ ವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ವನ್ಯಜೀವಿ ಸಂರಕ್ಷಣೆಗಾಗಿ ತೋರಿದ ಸಮರ್ಪಣಾಭಾವ ಮತ್ತು ಪರಿಶ್ರಮ ಎಂದೆಂದಿಗೂ ಸ್ಮರಣೀಯ.

ಮೊದಲು ಕೇವಲ ಮರಿ ಹಿಪ್ಪೊಗೆ ಮಾತ್ರ ಡಾ. ಸಮೀಕ್ಷಾ ಅವರ ಹೆಸರಿಡಲಾಗಿತ್ತು.

ಆದರೆ ಅವರ ಈ ತ್ಯಾಗ ಮತ್ತು ಸೇವೆ ಇತಿಹಾಸದಲ್ಲಿ ಸದಾ ಅಚ್ಚಳಿಯದೆ ಉಳಿಯಬೇಕು ಎಂಬ ಕಾರಣಕ್ಕೆ, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಇಡೀ ಹಿಪ್ಪೊ ಬ್ಲಾಕ್‌ಗೆ 'ಸಮೀಕ್ಷಾ ಬ್ಲಾಕ್' ಎಂದು ನಾಮಕರಣ ಮಾಡುವಂತೆ ನಾನು ಶಿಫಾರಸು ಮಾಡಿದ್ದೇನೆ.

ಅಲ್ಲದೆ, ಈ ಲೋಕಾರ್ಪಣೆ ಸಮಾರಂಭಕ್ಕೆ ಡಾ. ಸಮೀಕ್ಷಾ ಅವರ ಪೋಷಕರನ್ನು ಆಹ್ವಾನಿಸುವಂತೆ ಅಧಿಕಾರಿಗಳಿಗೆ ತಿಳಿಸಿದ್ದು, ಈ ಕಾರ್ಯಕ್ರಮದಲ್ಲಿ ನಾನೂ ಸಹ ಸ್ವತಃ ಉಪಸ್ಥಿತನಿರಲಿದ್ದೇನೆ.

ಅವರ ಈ ಸ್ಮರಣೆ ಸದಾ ಜೀವಂತವಾಗಿರುತ್ತದೆ.

Dr. Sameeksha Reddy, the courageous wildlife veterinarian who tragically lost her life while treating a pregnant hippopotamus, showed extraordinary dedication to wildlife conservation.

While initially only a baby hippo was named in her memory, believing that her name should forever be etched in history, I have recommended naming the entire Hippopotamus block at Bannerghatta Biological Park as the 'Sameeksha Block'.

I have also instructed the officials to invite her parents for the upcoming unveiling ceremony, which I will be personally attending.

Her inspiring dedication sheds light on the immense risks and vital commitment involved in wildlife veterinary care, ensuring her noble legacy will forever be remembered.

#BannerghattaBiologicalPark #Bengaluru #RamalingaReddy #SameekshaReddy
2 replies 12 reposts 94 likes 5.1K views View on X
Ramalinga Reddy Verified account @RLR_BTM
ಬೆಂಗಳೂರಿನ ಹೆಮ್ಮೆಯ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನವನ್ನು (BBP) ಪ್ರವಾಸಿಗರಿಗೆ ಮತ್ತಷ್ಟು ಅನುಕೂಲಕರವಾಗಿಸಲು ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಬಲಪಡಿಸುವ ಉದ್ದೇಶದಿಂದ, ಒಟ್ಟು ₹38 ಕೋಟಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಪ್ರವಾಸಿ ಸ್ನೇಹಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ನೂತನ ಸೌಲಭ್ಯಗಳನ್ನು ಇಂದು ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದೆ.

ಮುಖ್ಯಾಂಶಗಳು ಹಾಗೂ ನೂತನ ಸೌಲಭ್ಯಗಳು:

⚡ ಪ್ರವಾಸಿಗರ ಸುಲಭ ಸಂಚಾರಕ್ಕಾಗಿ ನೂತನ ಎಲೆಕ್ಟ್ರಿಕ್ ವಾಹನಗಳು

🏢 ನೂತನವಾಗಿ ನಿರ್ಮಿಸಲಾದ ಆಡಳಿತ ಕಚೇರಿ "ಅಡವಿ" ಕಟ್ಟಡ

🌱 ಲೈವ್ ಫೀಡ್ ಘಟಕ ಹಾಗೂ ಕೇಂದ್ರೀಯ ನರ್ಸರಿ ಉದ್ಘಾಟನೆ

🏥 ನೂತನ ಕ್ಯಾರಂಟೈನ್ ಬ್ಲಾಕ್ ಮತ್ತು ಅರಣ್ಯ ಸಿಬ್ಬಂದಿಗಳ ವಸತಿಗೃಹಗಳು

🚪 ಉದ್ಯಾನವನದ ಆಕರ್ಷಕ ನವೀಕೃತ ಮುಖ್ಯ ಪ್ರವೇಶ ದ್ವಾರ

🛍️ ಹೊಸದಾಗಿ ಪ್ರಾರಂಭಿಸಲಾದ "ಝೂ ಶಾಪ್" ಹಾಗೂ "ಸುವರ್ಣಮುಖಿ ಕೆಫೆ"

🐺 ನೂತನ ಪ್ರಾಣಿ-ಪಕ್ಷಿಗಳ ಆವರಣಗಳು: ತೋಳ, ಚೀತಾ, ಎಮು ಮತ್ತು ರಿಯಾ ಪಕ್ಷಿಗಳು ಹಾಗೂ ಫೆಸೆಂಟ್ ಪಕ್ಷಿಗಳ ಆವರಣ

🦛 ವಿಶೇಷ ನಮನ:

ಶಿವಮೊಗ್ಗದಲ್ಲಿ ಹಿಪ್ಪೋಪೊಟಮಸ್ ಚಿಕಿತ್ಸಾ ಸಮಯದಲ್ಲಿ ಕರ್ತವ್ಯದ ವೇಳೆ ಅಸುನೀಗಿದ ದಕ್ಷ ಪಶುವೈದ್ಯೆ ಡಾ. ಸಮೀಕ್ಷಾ ಅವರ ಸ್ಮರಣಾರ್ಥ, ಹಿಪ್ಪೋಪೊಟಮಸ್ ಬ್ಲಾಕ್ ಹಾಗೂ ಮರಿ ಹಿಪ್ಪೋಪೊಟಮಸ್‌ಗೆ "ಸಮೀಕ್ಷ" ಎಂದು ನಾಮಕರಣ ಮಾಡಲಾಯಿತು.

ವನ್ಯಜೀವಿಗಳ ಸೇವೆಗಾಗಿ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ.

🐘 ಸುವರ್ಣ ಆನೆ ಆರೈಕೆ ಕೇಂದ್ರ:

ಆನೆಗಳ ಆರೋಗ್ಯ, ಆರೈಕೆ ಮತ್ತು ಕಲ್ಯಾಣಕ್ಕಾಗಿ ಮೀಸಲಾಗಿರುವ “ಸುವರ್ಣ ಆನೆ ಆರೈಕೆ ಕೇಂದ್ರ”ದ ವೀಕ್ಷಣಾ ಗೋಪುರವನ್ನು ಉದ್ಘಾಟಿಸಿ, ಸಫಾರಿ ವೀಕ್ಷಣೆಯ ಮೂಲಕ ಉದ್ಯಾನವನದಲ್ಲಿ ಕೈಗೊಳ್ಳಲಾಗುತ್ತಿರುವ ವನ್ಯಜೀವಿ ಸಂರಕ್ಷಣಾ ಚಟುವಟಿಕೆಗಳನ್ನು ಪರಿಶೀಲಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಬಿ. ಶಿವಣ್ಣ, ಶ್ರೀ ಎಂ. ಕೃಷ್ಣಪ್ಪ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥರಾದ ಶ್ರೀ ರವಿ ಬಿ.ಪಿ., ಭಾ.ಅ.ಸೇ ಹಾಗೂ ಇತರೆ ಹಿರಿಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.

#BannerghattaBiologicalPark #RamalingaReddy #KarnatakaForest #WildlifeConservation #EcoTourism
1 replies 4 reposts 50 likes 1.2K views View on X
Ramalinga Reddy Verified account @RLR_BTM
ಗುಲಾಬಿ ಮಾರ್ಗದ (Pink Line)

🚇 ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ- ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣ

🚇 ಜೆಪಿ ನಗರ 4ನೇ ಹಂತದ ಮೆಟ್ರೋ ನಿಲ್ದಾಣಕ್ಕೆ- ಎನ್.ಎಸ್ ಪಾಳ್ಯ ಮೆಟ್ರೋ ನಿಲ್ದಾಣ

🚇 IIMB ಮೆಟ್ರೋ ನಿಲ್ದಾಣಕ್ಕೆ ಬಿಳೇಕಹಳ್ಳಿ – IIMB ಮೆಟ್ರೋ ನಿಲ್ದಾಣ

ಎಂದು ನಾಮಕರಣ ಮಾಡುವಂತೆ ನಾನು, ಜಿಬಿಎ ಸಚಿವರಾದ ಶ್ರೀ ಕೃಷ್ಣಭೈರೇ ಗೌಡ, ಸಂಸದರಾದ ಶ್ರೀ ತೇಜಸ್ವಿ ಸೂರ್ಯ ಶಾಸಕರಾದ ಶ್ರೀ ಸತೀಶ್ ರೆಡ್ಡಿ, ಶ್ರೀ ಉದಯ್ ಗರುಡಾಚಾರ್, ಶ್ರೀ ಎಂ. ಕೃಷ್ಣಪ್ಪ ಅವರನ್ನು ಒಳಗೊಂಡ ನಮ್ಮ ಸಮಿತಿ ವತಿಯಿಂದ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ (BMRCL) ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಲಾಗಿದೆ.

ಕೇಂದ್ರ ಸಚಿವಾಲಯದಿಂದ ಅಗತ್ಯ ಅನುಮೋದನೆ ದೊರೆತು ಈ ಹೆಸರುಗಳು ಶೀಘ್ರ ಅನುಷ್ಠಾನಗೊಳ್ಳುತ್ತದೆ ಎಂಬ ನಂಬಿಕೆ ನನಗಿದೆ.

#RamalingaReddy #NammaMetro #SGPalya #NSPalya #Bilekahalli #IIMB
13 replies 4 reposts 135 likes 19K views View on X
Ramalinga Reddy Verified account @RLR_BTM
ನಮ್ಮ ಹೆಮ್ಮೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆ, ಮಾನವ-ವನ್ಯಜೀವಿ ಸಂಘರ್ಷ ತಡೆ ಕ್ರಮಗಳು, ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಮುಂಚೂಣಿ ಸಿಬ್ಬಂದಿಯ ಕಲ್ಯಾಣ ಕಾರ್ಯಕ್ರಮಗಳ ಕುರಿತು ಸಮಗ್ರ ಪರಿಶೀಲನಾ ಸಭೆ ನಡೆಸಿ, ಕ್ಷೇತ್ರ ಭೇಟಿ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಪ್ರಮುಖವಾಗಿ ಚರ್ಚಿಸಲಾದ ಮತ್ತು ಜಾರಿಗೆ ತಂದ ಪ್ರಮುಖಾಂಶಗಳು ಇಲ್ಲಿವೆ:

🔹 ಹುಲಿಗಳ ಸಂಖ್ಯೆ & ಪರಿಸರ ಸಮತೋಲನ:

ಬಂಡೀಪುರದಲ್ಲಿ ಹುಲಿಗಳ ಸಂಖ್ಯೆ 155ಕ್ಕೂ ಹೆಚ್ಚು ಏರಿಕೆಯಾಗಿದ್ದು, ಪ್ರತಿ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹೇರಳವಾದ ಬೇಟೆ ಪ್ರಾಣಿಗಳು (ಜಿಂಕೆ, ಕಾಡೆಮ್ಮೆ, ಕಡವೆ) ಇರುವುದು ಕಾಡಿನ ಆರೋಗ್ಯಕರ ಪರಿಸರಕ್ಕೆ ಸಾಕ್ಷಿಯಾಗಿದೆ.

🚀 ಪ್ರಮುಖ ಲೋಕಾರ್ಪಣೆಗಳು & ಕೈಪಿಡಿ ಬಿಡುಗಡೆ:

* ಬಂಡೀಪುರದಿಂದ ಸಿದ್ಧಪಡಿಸಲಾದ "ಡ್ರೋನ್ ಪೈಲಟ್ ಕ್ಷೇತ್ರ ಕೈಪಿಡಿ" (Drone Pilot Field Manual) ಬಿಡುಗಡೆ.

* ಪ್ರವಾಸಿಗರ ಸೇವೆಗಳನ್ನು ಬಲಪಡಿಸಲು "ಇಕೋ-ಟೂರಿಸಮ್ ಕ್ವಾಲಿಟಿ ಅಶ್ಯುರೆನ್ಸ್ & ವಿಸಿಟರ್ ರಿಡ್ರೆಸಲ್ ಪ್ಲಾಟ್‌ಫಾರ್ಮ್" ಲೋಕಾರ್ಪಣೆ.

* ಪರಿಸರ ಸಂರಕ್ಷನೆಯ ಸಂಕೇತವಾಗಿ ಸಸಿ ನೆಡುವ ಕಾರ್ಯ.

🛡️ ಸಿಬ್ಬಂದಿ ಕಲ್ಯಾಣ ಹಾಗೂ ವಿಶೇಷ ಕಾರ್ಯಪಡೆಗಳು:

* ಕಾಡಿನ ರಕ್ಷಣೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮುಂಚೂಣಿ ಸಿಬ್ಬಂದಿಗೆ ರೇಷನ್ ಕಿಟ್‌ಗಳ ವಿತರಣೆ ಹಾಗೂ ಕ್ಷೇತ್ರ ಕಾರ್ಯಚಟುವಟಿಕೆಗಳಿಗೆ ಹೊಸ ವಾಹನಗಳ ವಿತರಣೆ.

* ಎಲಿಫೆಂಟ್ ಟಾಸ್ಕ್ ಫೋರ್ಸ್ ಹಾಗೂ ಚಿರತೆ ಕಾರ್ಯಪಡೆ (Leopard Task Force) ಸಿಬ್ಬಂದಿಯನ್ನು ಭೇಟಿ ಮಾಡಿ ಸಾರ್ವಜನಿಕ ಸುರಕ್ಷತಾ ಕ್ರಮಗಳ ಪರಿಶೀಲನೆ.

🛰️ ತಂತ್ರಜ್ಞಾನದ ಬಳಕೆ & ನಿಯಂತ್ರಣ ಕೇಂದ್ರಗಳು:

* ಥರ್ಮಲ್ ಡ್ರೋಣ್‌ಗಳು, ಜಿಪಿಎಸ್ ರೇಡಿಯೋ ಕಾಲರ್‌ಗಳು, ವನ್ಯಜೀವಿ ಟೆಲಿಮೆಟ್ರಿ ಹಾಗೂ ಗಸ್ತು ಉಪಕರಣಗಳ ಪ್ರದರ್ಶನ ವೀಕ್ಷಣೆ.

* ಜಿಲ್ಲಾ ಸಂಘರ್ಷ ನಿಯಂತ್ರಣ ಕೇಂದ್ರ ಹಾಗೂ ಅರಣ್ಯ ಇಲಾಖೆಯ ಶ್ವಾನ ದಳದ (Dog Squad) ಕಾರ್ಯವೈಖರಿ ಪರಿಶೀಲನೆ.

🐘 ಮಾನವ-ವನ್ಯಜೀವಿ ಸಂಘರ್ಷ ತಡೆ & ಅರಣ್ಯ ರಕ್ಷಣೆ:

* ರೈಲ್ವೆ ಬ್ಯಾರಿಕೇಡ್‌ಗಳು, ಸೋಲಾರ್ ಫೆನ್ಸಿಂಗ್ ಹಾಗೂ ಆನೆ ಕಂದಕಗಳ ಪರಿಣಾಮಕಾರಿ ನಿರ್ವಹಣೆ.

* ಬಂಡೀಪುರ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ ಒತ್ತುವರಿಯನ್ನು ಸಂಪೂರ್ಣ ತೆರವುಗೊಳಿಸಲು ಹಾಗೂ ಕಳ್ಳಬೇಟೆ ತಡೆ ಶಿಬಿರಗಳ (APC Camps) ದುರಸ್ತಿಗೆ ಕಟ್ಟುನಿಟ್ಟಿನ ಸೂಚನೆ.

* ಮೂಲೇಹೊಳೆ ಚೆಕ್‌ಪೋಸ್ಟ್ ಪರಿಶೀಲಿಸಿ, ಹೊರರಾಜ್ಯದಿಂದ ಬರುವ ವೈದ್ಯಕೀಯ ತ್ಯಾಜ್ಯಗಳ ವಿಲೇವಾರಿ ತಡೆಯಲು ಕಟ್ಟುನಿಟ್ಟಿನ ಕ್ರಮ.

* ವನ್ಯಜೀವಿ ದಾಳಿಯಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಮತ್ತು ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಭರವಸೆ.

🌿 ಆವಾಸಸ್ಥಾನ ನಿರ್ವಹಣೆ & ಕಾಳ್ಗಿಚ್ಚು ತಡೆ:

* ಅರಣ್ಯದಲ್ಲಿ ಸಫಾರಿ ನಡೆಸಿ ಪರಿಸರ ವ್ಯವಸ್ಥೆ ಅವಲೋಕನ.

* ಲ್ಯಾಂಟಾನಾ (Lantana) ಹಾಗೂ ಸೆನ್ನಾ ಸ್ಪೆಕ್ಟಾಬಿಲಿಸ್ (Senna spectabilis) ಆಕ್ರಮಣಕಾರಿ ಕಳೆಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವುದು ಮತ್ತು ಕಾಳ್ಗಿಚ್ಚು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚೆ.

ಈ ಸಭೆಯಲ್ಲಿ ಗುಂಡ್ಲುಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಗಣೇಶ್ ಪ್ರಸಾದ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಶ್ರೀ ಕುಮಾರ್ ಪುಷ್ಕರ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮನೋಜ್ ರಾಜನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ರವಿಶಂಕರ್ ಆರ್. ಹಾಗೂ ಡಾ. ಎಂ. ಮಾಲತಿ ಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶ್ರೀ ನಂದೀಶ್ ಎಲ್. ಮತ್ತು ಡಾ. ಪ್ರಭು ಗೌಡ್, ವಲಯ ಅರಣ್ಯಾಧಿಕಾರಿಗಳಾದ ಶ್ರೀ ಸತೀಶ್ ಹಾಗೂ ಶ್ರೀ ಮೋಹನ್ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಡು, ನಾಡು ಹಾಗೂ ವನ್ಯಜೀವಿಗಳ ಸಂರಕ್ಷಣೆ ಮತ್ತು ರೈತರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಸದಾ ಬದ್ಧವಾಗಿದೆ.

#Bandipur #KarnatakaForest #RamalingaReddy #WildlifeConservation #TigerReserve #ForestDepartment #Karnataka #EcoTourism #Conservation